ಕೊನೆಯದಾಗಿ ನವೀಕರಿಸಲಾಗಿದೆ: ಸೆಪ್ಟಂಬರ್ 25, 2026
ನಿಮ್ಮ ಗೌಪ್ಯತೆ ಬಗ್ಗೆ ನಮಗೆ ಕಾಳಜಿ ಇದೆ
ನಿಮ್ಮ ಗೌಪ್ಯತೆಯನ್ನು ನಾವು ಗೌರವಿಸುತ್ತೇವೆ. ನಮ್ಮ ಮಿಂದಾಣದಲ್ಲಿ ನಿಮ್ಮಿಂದ ನಾವು ಸಂಗ್ರಹಿಸಬಹುದಾದ ಯಾವುದೇ ಮಾಹಿತಿಯನ್ನ ಗೌಪ್ಯವಾಗಿಡಲು ನಾವು ಬದ್ಧರಾಗಿದ್ದೇವೆ.
ಈ ಮಿಂದಾಣ ಕನ್ನಡ ಪದಗಳ ಆಟಗಳು ಮತ್ತು ಸಾಮಾನ್ಯ ಜ್ಞಾನದ ಪಟ್ಟಿಗಳಿಗಾಗಿ ರಚಿಸಲಾದ ವೈಯಕ್ತಿಕ ಉಪಕ್ರಮವಾಗಿದೆ. ನಿಮ್ಮ ವೈಯಕ್ತಿಕ ಡೇಟಾವನ್ನು ರಕ್ಷಿಸಲು ಮತ್ತು ನಾವು ಅದನ್ನು ಹೇಗೆ ಬಳಸುತ್ತೇವೆ ಎಂಬುದರ ಕುರಿತು ಪಾರದರ್ಶಕವಾಗಿರಲು ನಾವು ಬದ್ಧರಾಗಿದ್ದೇವೆ.
1. ನಾವು ಸಂಗ್ರಹಿಸುವ ಮಾಹಿತಿ
ನೀವು ಖಾತೆಯನ್ನು ರಚಿಸಿದಾಗ ಅಥವಾ ನಮ್ಮ ಆಟಗಳನ್ನು ಆಡಲು ಒಳ ಬಂದಾಗ, ನಾವು ಈ ಕೆಳಗಿನ ವಿವರಗಳನ್ನು ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ:
- ಖಾತೆ ಮಾಹಿತಿ: ನಿಮ್ಮ ಪೂರ್ಣ ಹೆಸರು ಮತ್ತು ಮಿಂಚೆ ವಿಳಾಸ.
- ಸಾಮಾಜಿಕ ಲಾಗಿನ್ ವಿವರಗಳು: ನೀವು ಗೂಗಲ್ (Google) ಬಳಸಿ ಸೈನ್ ಅಪ್ ಮಾಡಿದರೆ, ಅವರ ಅಧಿಕೃತ ವೇದಿಕೆಗಳಿಂದ ನಿಮ್ಮ ಹೆಸರು ಮತ್ತು ಇಮೇಲ್ ವಿಳಾಸವನ್ನು ನಾವು ಸುರಕ್ಷಿತವಾಗಿ ಪಡೆದುಕೊಳ್ಳುತ್ತೇವೆ.
2. 3ನೆ ಪಾರ್ಟಿ ಸೇವೆಗಳ ಬಳಕೆ ಮತ್ತು ಕುಕೀಸ್
ನಮ್ಮ ತಾಣದಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ನಾವು ಗೂಗಲ್ ಆಡ್ಸೆನ್ಸ್ (Google AdSense) ಅನ್ನು ಬಳಸುತ್ತೇವೆ. ಈ ಮಿಂದಾಣಕ್ಕೆ ಅಥವಾ ಮಿಂಬಲೆಯ ಇತರ ತಾಣಗಳಿಗೆ ನೀವು ನೀಡಿದ ಹಿಂದಿನ ಭೇಟಿಗಳ ಆಧಾರದ ಮೇಲೆ ಜಾಹೀರಾತುಗಳನ್ನು ತೋರಿಸಲು ಗೂಗಲ್ ಕುಕೀಸ್ ಅನ್ನು ಬಳಸುತ್ತದೆ.
- ಗೂಗಲ್ ಸೇರಿದಂತೆ ಮೂರನೇ ವ್ಯಕ್ತಿಯ ಮಾರಾಟಗಾರರು, ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ತೋರಿಸಲು ಟ್ರ್ಯಾಕಿಂಗ್ ಕುಕೀಗಳನ್ನು ಬಳಸುತ್ತಾರೆ.
- ನೀವು ಗೂಗಲ್ ಜಾಹೀರಾತು ಆಯ್ಕೆಗಳು Google Ad Settings ಪುಟಕ್ಕೆ ಭೇಟಿ ನೀಡುವ ಮೂಲಕ ವೈಯಕ್ತಿಕಗೊಳಿಸಿದ ಜಾಹೀರಾತುಗಳಿಂದ ಹೊರಗುಳಿಯಬಹುದು.
3. ಡೇಟಾ ನಿಯಂತ್ರಣ ಮತ್ತು ಅಳಿಸುವಿಕೆ
ನಿಮ್ಮ ಖಾತೆಯು ಸಕ್ರಿಯವಾಗಿರುವವರೆಗೆ ಮಾತ್ರ ನಾವು ನಿಮ್ಮ ಮಾಹಿತಿಯನ್ನು ಇಟ್ಟುಕೊಳ್ಳುತ್ತೇವೆ. ನಿಮ್ಮ ಡೇಟಾದ ಮೇಲೆ ನಿಮಗೆ ಸಂಪೂರ್ಣ ನಿಯಂತ್ರಣವಿರುತ್ತದೆ. ನಿಮ್ಮ ಖಾತೆಯನ್ನು ಮುಚ್ಚಲು ಮತ್ತು ನಿಮ್ಮ ಹೆಸರು ಹಾಗೂ ಇಮೇಲ್ ಅನ್ನು ನಮ್ಮ ಸಿಸ್ಟಮ್ನಿಂದ ಸಂಪೂರ್ಣವಾಗಿ ಅಳಿಸಲು ನೀವು ಬಯಸಿದರೆ, ದಯವಿಟ್ಟು ನಮ್ಮ ಪ್ರತ್ಯೇಕ ಡೇಟಾ ಅಳಿಸುವಿಕೆ ವಿನಂತಿ ಪುಟಕ್ಕೆ ಭೇಟಿ ನೀಡುವ ಮೂಲಕ ಸ್ವಯಂಚಾಲಿತವಾಗಿ ಅಳಿಸಬಹುದು. ವಿನಂತಿ ಸ್ವೀಕರಿಸಿದ 30 ದಿನಗಳ ಒಳಗಾಗಿ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ನಮ್ಮ ಸರ್ವರ್ಗಳಿಂದ ಸಂಪೂರ್ಣವಾಗಿ ಶಾಶ್ವತವಾಗಿ ಅಳಿಸಲಾಗುವುದು.
4. ನಮ್ಮನ್ನು ಸಂಪರ್ಕಿಸಿ
ಈ ಗೌಪ್ಯತಾ ನೀತಿ ಅಥವಾ ನಮ್ಮ ಡೇಟಾ ನಿರ್ವಹಣಾ ವಿಧಾನಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು ಈ ವಿಳಾಸಕ್ಕೆ ಮಿಂಚೆ ಕಳಿಸಿ: ನಮ್ಮನ್ನು ಸಂಪರ್ಪಕಿಸಿ